1967 ರಲ್ಲಿ ಪ್ರಾರಂಭವಾದ ತುಂಗಾ ಮಹಾವಿದ್ಯಾಲಯ ಮಲೆನಾಡು ಪ್ರದೇಶವಾದ ತೀರ್ಥಹಳ್ಳಿಯ ಸದೃಢ ಶಿಕ್ಷಣಸಂಸ್ಥೆ. ಈ ಸಂಸ್ಥೆಯ ಮೂಲಕ ನಾವು ತೀರ್ಥಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ.
ನಮ್ಮ ಸಂಸ್ಥೆಯ ಬುನಾದಿ ತುಂಗಾವಿದ್ಯಾವರ್ಧಕ ಸಂಘ(ರಿ). ಇದರ ಮಾರ್ಗದರ್ಶನದಲ್ಲಿ ತುಂಗಾ ಪದವಿ ಪೂರ್ವ ಕಾಲೇಜು, ತುಂಗಾಮಹಾವಿದ್ಯಾಲಯ ಮತ್ತು ತುಂಗಾ ಸ್ನಾತಕೋತ್ತರ ಎಂ,ಕಾಂ, ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ 50 ವರ್ಷಗಳ ಪ್ರಯಾಣದಲ್ಲಿ ನಾವು ಉನ್ನತ ಶ್ರೇಣಿಯ ರೈತರು, ಸಾಹಿತಿಗಳು, ಸಂಶೋಧಕರು, ಸಹಕಾರಿಗಳು, ಸೈನಿಕರು, ರಾಜಕಾರಣಿಗಳು ಮೊದಲಾಗಿ ಶಿಕ್ಷಣ ತಜ್ಞರು, ರಾಜ್ಯ ಮತ್ತು ರಾಷ್ಟ್ರ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಚಾಂಪಿಯನ್ಗಳನ್ನು ಸೃಜಿಸಿದ್ದೇವೆ.
ನಗರ ಪ್ರದೇಶಗಳ ಸಂಸ್ಥೆಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶೈಕ್ಷಣಿಕ ಸಾಧನೆ ಅದ್ವೀತಿಯವಾಗಿದೆ. ಸಂಸ್ಕೃತಿವಾಗಿ, ಸಾಮಾಜಿಕವಾಗಿ ನಾವು ನಮ್ಮ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜೀವನ ತಲುಪಿಸಲು ಕಟಿಬದ್ಧರಾಗಿದ್ದೇವೆ. ಈ ನೆಲೆಯಲ್ಲಿ ನಾವು ನಮ್ಮ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಸಾಹಿತ್ತಿಕ ಹಾಗೂ ಸಂಸ್ಕಾರಯುತ ಜೀವನ ನಿರ್ಮಾಣವಾಗಲು ಪೂರಕವಾದ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ.
ಕಾಲೇಜಿನ ಬಗ್ಗೆಉನ್ನತ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಮತ್ತು ವ್ಯಕ್ತಿತ್ವ ನಿರ್ಮಾಣ.
ಜಾಗತೀಕರಣಗೊಳ್ಳುತ್ತಿರುವ ಜಗತ್ತಿನ ಅಗತ್ಯತೆಗಳು, ಮೌಲ್ಯಗಳು ಮತ್ತು ಔದ್ಯೋಗಿಕ ಭೇಡಿಕೆಗಳನ್ನಾಧರಿಸಿದ ಉನ್ನತ ಶಿಕ್ಷಣ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದ ಈ ಮಲೆನಾಡಿನ ವಿದ್ಯಾರ್ಥಿಗಳಿಗೆ ಒದಗಿಸುವುದು ಹಾಗೂ ಆ ಮೂಲಕ ಒಂದು ಶ್ರೇಷ್ಠಾಂಕಿತ ವಿದ್ಯಾಸಂಸ್ಥೆಯಾಗುವತ್ತ ಮುನ್ನಡೆಯುವುದು.
ವಿದ್ಯಾರ್ಥಿಗಳಿಗೆ ನಗರ ಪ್ರದೇಶದ ಮಿತಿಯವರೆಗೆ ಬಸ್ ಸೌಲಭ್ಯ ಸುಧಾರಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ.
450 ಆಸನ ಹೊಂದಿರುವ ವಿಶಾಲವಾದ ಸಭಾಂಗಣ 200 ವ್ಯಕ್ತಿಗಳ ಆಸನ ಸಾಮಥ್ರ್ಯದ ಸೆಮಿನಾರ್ ಹಾಲ್.
ಉತ್ತಮ ಸೌಕರ್ಯಗಳನ್ನು ಹೊಂದಿರುವ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು.